ಇಕ್ನೂಮಾನ್ ನೊಣ-
ಹೈಮಿನಾಪ್ಟೆರ ಉಪವರ್ಗದ ಇಕ್ನೊಮಾನಿಡೆ ಕುಟುಂಬಕ್ಕೆ ಸೇರಿದ ಕೀಟಗಳು. ಸರ್ವವ್ಯಾಪಿ. ಲೆಪಿಡಾಪ್ಟೆರ ಅಥವಾ ಇತರ ಉಪವರ್ಗದ ಕೀಟಗಳ ದೇಹಗಳೊಳಗೆ ಉಪಜೀವಿಗಳಾಗಿ ಡಿಂಭಾವಸ್ಥೆಯನ್ನು ಕಳೆಯುತ್ತವೆ. ಡಿಂಭಗಳು ಲೆಕ್ಕವಿಲ್ಲದಷ್ಟು ಕಂಬಳಿ ಹುಳುಗಳನ್ನು ನಾಶಮಾಡಬಲ್ಲವು. ಅಲ್ಲದೆ ಅನೇಕ ವೇಳೆ ಜೇಡಗಳನ್ನೂ ತಿಂದು ಹಾಕುತ್ತವೆ. ಸದಾ ಅದುರುತ್ತಿರುವ ತಂತುರೂಪದ ಕುಡಿ ಮೀಸೆಗಳು ಈ ನೊಣದ ವೈಶಿಷ್ಟ್ಯ. ಮೆಗಾರಿಸ್ಸ ಮತ್ತು ತಾಲೆಸ್ಸ ಜಾತಿಯ ಹೆಣ್ಣು ಇಕ್ನೂಮಾನ್ ನೊಣಗಳಿಗೆ 3" ಅಥವಾ 4" ಉದ್ದವಾದ ಮೊಟ್ಟೆಗಳನ್ನು ಸಾಗಿಸುವ ಚೂಪು ನಾಳಾಂಗವಿದೆ. ಪೋಷಕ ಜೀವಿಯ ದೇಹವನ್ನು ನಾಳಾಂಗದ ಸಹಾಯದಿಂದ ಕೊರೆದು ನೊಣ ಮೊಟ್ಟೆಗಳನ್ನಿಡುವುದು. ಬ್ರಿಟನ್ನಿನ ಪೀಜೊóೀಮೇಕಸ್ ಎಂಬುದು ರೆಕ್ಕೆಗಳಿಲ್ಲದ ಇರುವೆಯನ್ನು ಹೋಲುತ್ತದೆ. ಅರ್ಜಿಯೊಟೈಪಸ್ ಆರ್ಮೇಟಸ್ ಎಂಬ ಇಕ್ನೂಮಾನ್ ನೊಣಗಳು ನೀರಿನಲ್ಲಿ ಮುಳುಗಿ ಟೈಕಾಪ್ಟೆರ ಕೀಟದ ಡಿಂಭಗಳಲ್ಲಿ ಮೊಟ್ಟೆಯಿಡುತ್ತವೆ.											   
(ಟಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ